Tuesday, May 7, 2024
spot_imgspot_img
spot_imgspot_img

ಕಂಬಳದ ಪರಿಷ್ಕೃತ ವೇಳಾಪಟ್ಟಿ ಪ್ರಕಟ;

- Advertisement -G L Acharya panikkar
- Advertisement -

ಮಂಗಳೂರು: ಕೊರೋನಾ ಮೂರನೆಯ ಅಲೆಯಿಂದಾಗಿ ರಾಜ್ಯಾದ್ಯಂತ ನೈಟ್‌ ಹಾಗೂ ವೀಕೆಂಡ್‌ ಕರ್ಫ್ಯೂ ಹೇರಿದ್ದ ಹಿನ್ನಲೆಯಲ್ಲಿ ಜಿಲ್ಲಾ ಕಂಬಳ ಸಮಿತಿಯಿಂದ ನಡೆಯುತ್ತಿದ್ದ ಕಂಬಳವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ಇದೀಗ ಕಂಬಳದ ಪರಿಷ್ಕೃತ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದೆ.

ಜನವರಿ ಮೊದಲ ವಾರದಿಂದ ಯಾವುದೇ ಕಂಬಳ ಕೂಟಗಳು ನಡೆದಿರಲಿಲ್ಲ. ಇದೀಗ ನೈಟ್‌ ಹಾಗೂ ವಿಕೇಂಡ್‌ ಕರ್ಫ್ಯೂ ತೆರವುಗೊಳಿಸಿ ರಾಜ್ಯ ಸರಕಾರ ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಸಭೆ ಸೇರಿದ ಜಿಲ್ಲಾ ಕಂಬಳ ಸಮಿತಿಯ ಬಾಕಿಯುಳಿದ ಕಂಬಳ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ದಪಡಿಸಿದೆ.

ಪರಿಷ್ಕೃತ ವೇಳಾಪಟ್ಟಿಯ ಅನುಸಾರ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಕಂಬಳ ಎಂಬ ಖ್ಯಾತಿ ಪಡೆದಿರುವ ಪುತ್ತೂರು ಕಂಬಳವು ಮಾ.19 ರಂದು ಹಾಗು ಉಪ್ಪಿನಂಗಡಿ ಕಂಬಳವು ಎ .2 ರಂದು ನಡೆಯಲಿದೆ.

ಪರಿಷ್ಕೃತ ವೇಳಾಪಟ್ಟಿ ಇಂತಿದೆ

05-02-2022 ಶನಿವಾರ – ಬಾರಾಡಿ ಬೀಡು ಕಂಬಳ
13-02-2022 ರವಿವಾರ – ಅಡ್ವೆ ನಂದಿಕೂರ್ ಕಂಬಳ
19-02-2022 ಶನಿವಾರ – ವಾಮಂಜೂರು ಕಂಬಳ
26-02-2022 ಶನಿವಾರ – ಐಕಳ ಬಾವ ಕಂಬಳ
05-03-2022 ಶನಿವಾರ – ಪೈವಳಿಕೆ ಕಂಬಳ
12-03-2022 ಶನಿವಾರ – ಕಟಪಾಡಿ ಕಂಬಳ
19-03-2022 ಶನಿವಾರ – ಪುತ್ತೂರು ಕಂಬಳ
26-03-2022 ಶನಿವಾರ – ಬಂಗ್ರಕೂಳೂರು, ಮಂಗಳೂರು ಕಂಬಳ
2-04-2022- ಉಪ್ಪಿನಂಗಡಿ ಕಂಬಳ
9-04-2022 – ಬಂಗಾಡಿ ಕಂಬಳ
16-04-2022- ವೇಣೂರು ಕಂಬಳ

ಕಂಬಳ ಆಯೋಜನೆಯ ಸಂದರ್ಭ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ದಕ್ಷಿಣ ಕನ್ನಡ – ಉಡುಪಿ – ಕಾಸರಗೋಡು ಕಂಬಳ ಕೇಂದ್ರ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!