Wednesday, October 14, 2026
spot_imgspot_img
spot_imgspot_img

ಮಂಗಳೂರು: ಮೊಬೈಲ್ ನಲ್ಲಿ ಮಾತನಾಡುತ್ತಿದ್ದುದನ್ನು ತಾಯಿ ಪ್ರಶ್ನಿಸಿದ್ದಕ್ಕೆ ಮನೆ ಬಿಟ್ಟು ಹೋದ ಯುವತಿ

- Advertisement -
- Advertisement -

ಮಂಗಳೂರು: ಮೊಬೈಲ್ ನಲ್ಲಿ ಹೆಚ್ಚು ಮಾತಾಡಬೇಡ ಎಂದು ಹೇಳಿದ್ದಕ್ಕೆ ಯುವತಿಯೊಬ್ಬಳು ಮನೆ ಬಿಟ್ಟು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಕುಕ್ಕದಕಟ್ಟೆ ಸೈಟ್ ನ ಕುಮಾರಿ ದೀಕ್ಷಾ (18) ನಾಪತ್ತೆಯಾದ ಹುಡುಗಿ. ಈಕೆ ಹೆಚ್ಚಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದು ಇದನ್ನು ಆಕೆಯ ತಾಯಿ ಪ್ರಶ್ನಿಸಿದ್ದರು.

ದೀಕ್ಷಾ ಜೂನ್ 6ರಂದು ಮನೆ ಬಿಟ್ಟು ಹೋಗಿದ್ದು, ಕಾಣೆಯಾದ ದೀಕ್ಷಾಳು ಹೆಚ್ಚಾಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದುದ್ದನ್ನು ತಾಯಿ ಪ್ರಶ್ನಿಸಿದ್ದ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದಾಳೆ. ಮಗಳನ್ನು ಪತ್ತೆಮಾಡಿ ಕೊಡುವಂತೆ ಆಕೆಯ ತಾಯಿ ಮೀನಾಕ್ಷಿ ಅವರು ಕೋಣಾಜೆ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!