




ಏಪ್ರಿಲ್ 3 ಶುಕ್ರವಾರದಂದು ಬೆಳಿಗ್ಗೆ 7 ಗಂಟೆಯಿಂದ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಅಂಕುರಪೂಜೆ, ಶಯ್ಯಾಪೂಜೆ ನಡೆಯಲಿದ್ದು, ಬೆಳಿಗ್ಗೆ 10.56 ರಿಂದ ಒದಗುವ ಮಿಥುನ ಲಗ್ನದ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು, ಶ್ರೀ ಮಹಾಗಣಪತಿ ಹಾಗೂ ಶ್ರೀ ಶಾಸ್ತಾರ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಜೀವಕಲಾಭಿಷೇಕ ಸೇರಿದಂತೆ ಅಷ್ಟಮಂಗಲ ದರ್ಶನ, ಗೋದರ್ಶನ, ನಿದ್ರಾಕಲಾಭಿಷೇಕ, ಕುಂಭೇಶ ಕಲಾಶಾಭಿಷೇಕ, ಆವಾಹನಾದಿಗಳು, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಪ್ರಸನ್ನ ಪೂಜೆ, ರುದ್ರಹೋಮ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ ಹಾಗೂ ಸಂತರ್ಪಣೆ ನಡೆಯಲಿದೆ.
ಸಂಜೆ 5 ಗಂಟೆಯಿಂದ ಕ್ಷೇತ್ರಾನುಷ್ಠಾನ ಪದ್ಧತಿ ನಿರ್ಣಯ, ಭದ್ರ ದೀಪ ಪ್ರತಿಷ್ಠೆ, ಪ್ರಾರ್ಥನೆ, ಕವಾಟಬಂಧನ, ಗರ್ಭದ್ವಾರದಲ್ಲಿ ಸೋಪಾನಪೂಜೆ, ಅಂಕುರಪೂಜೆ ಹಾಗೂ ಶ್ರೀ ದುರ್ಗಾಪೂಜೆ ನಡೆಯಲಿವೆ.
ಬೆಳಿಗ್ಗೆ 8.30ರಿಂದ 10.30ರ ವರೆಗೆನಡೆಯುವ ಭಜನಾ ಕಾರ್ಯಕ್ರಮದಲ್ಲಿ ಚಿಪ್ಪಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಾಗೂ ಬಾಯಾರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಭಾಗವಹಿಸಲಿವೆ.
ಬೆಳಿಗ್ಗೆ 9.30ರಿಂದ ಡಾ. ಮಹೇಶ ಪದ್ಯಾಣ ಮತ್ತು ತಂಡದಿಂದ ಗಾಯನ, ನವಾವರಣ ಕೃತಿಗಳು ಮತ್ತು ಭಕ್ತಿಗೀತೆಗಳು “ಸಂಗೀತವಾಹಿನಿ” ಎಂಬ ಗಾಯನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1.30ರಿಂದ ಎ.ಕೆ. ಉಮಾನಾಥ ದೇವಾಡಿಗ ಅಶ್ವತ್ಥಪುರ ಹಾಗೂ ಬಳಗದಿಂದ “ನಾದಸ್ವರ ಕಚೇರಿ”, ಮಧ್ಯಾಹ್ನ 2.30ರಿಂದ ಶ್ರೀಮತಿ ಮಧುಮಿತ ಪಡುಮಲೆ ಮತ್ತು ಕುಮಾರಿ ತನ್ಮಯಿ ಉಪ್ಪಂಗಳ ಇವರಿಂದ “ವೀಣೆ-ವಯೋಲಿನ್ ಕಚೇರಿ” ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಮದ್ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಡಾ. ಟಿ. ಶ್ಯಾಮ್ ಭಟ್ (ಐಎಎಸ್ ನಿವೃತ್ತ) ಅಧ್ಯಕ್ಷತೆ ವಹಿಸಲಿದ್ದಾರೆ, ಧಾರ್ಮಿಕ ಉಪನ್ಯಾಸ ಗೋಪಾಲ್ ಜಿ, ವಿಶ್ವಹಿಂದೂ ಪರಿಷತ್ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆ. ಗೌರವ ಉಪಸ್ಥಿತಿ ವೇದಮೂರ್ತಿ ಶ್ರೀ ಸುಬ್ರಮಣ್ಯ ಅಡಿಗರು, ಪ್ರಧಾನ ಅರ್ಚಕರು, ಮೂಕಾಂಬಿಕಾ ದೇವಸ್ಥಾನ ಶ್ರೀ ಕ್ಷೇತ್ರ ಕೊಲ್ಲೂರು, ವೇದಮೂರ್ತಿ ವಿದ್ವಾನ್ ಡಾ. ಪ್ರಭಾಕರ ಅಡಿಗ , ಪ್ರಧಾನ ಅರ್ಚಕರು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಶುಭಾಸಂಶನೆ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಮಹಾರಾಜರು ಮೈಸೂರು ಸಂಸ್ಥಾನ ಹಾಗೂ ಸಂಸದರು , ಮೈಸೂರು -ಕೊಡಗು ಲೋಕಸಭಾ ಕ್ಷೇತ್ರ, ಡಾ. ಕನ್ಯಾನ ಸದಾಶಿವ ಶೆಟ್ಟಿ FOUNDER, CHAIRMAN AND EXECUTIVE DIRECTOR, HERAMBA INDUSTRIES, MUMBAI, ಕೆ.ಕೆ ಶೆಟ್ಟಿ ಕುತ್ತಿಕ್ಕಾರ್, ಆಡಳಿತ ಮೊಕ್ತೇಸರರು, ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮುಂಡಪಳ್ಳ , ಕುಂಬ್ಳೆ, ಹಾಗೂ ಇನ್ನಿತರ ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ರಾತ್ರಿ 7 ಗಂಟೆಯಿಂದ ನಾಗವ್ರಜ ಕ್ಷೇತ್ರ, ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ “ತ್ರಿಪುರ ಮಥನ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.








