Thursday, July 23, 2026
spot_imgspot_img
spot_imgspot_img

ಪೆರ್ನೆ: ಗೋ ಕಳ್ಳತನದ ವಿರುದ್ಧ ಪ್ರತಿಭಟನೆ ಮತ್ತು ಪತ್ರಿಕಾಗೋಷ್ಠಿ ಪ್ರಕರಣ

- Advertisement -
- Advertisement -

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಪೆರ್ನೆಯಲ್ಲಿ ನಡೆದ ಗೋ ಕಳ್ಳತನದ ವಿರುದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿಯವರು ಪತ್ರಿಕಾ ಗೋಷ್ಠಿ ನಡೆಸಿ, ಪ್ರತಿಭಟನೆಗೆ ಕರೆ ನೀಡಿ ಪ್ರತಿಭಟನೆ ನಡೆಸಲಾಗಿತ್ತು.

ಪತ್ರಿಕಾ ಗೋಷ್ಠಿ ಮತ್ತು ಪ್ರತಿಭಟನೆಯಲ್ಲಿ ಪೊಲೀಸರ ಕರ್ತವ್ಯವನ್ನು ಪ್ರಶ್ನಿಸಿದ್ದ ಕಾರಣಕ್ಕೆ ನರಸಿಂಹ ಮಾಣಿ ಮೇಲೆ ಪ್ರಕರಣ ದಾಖಲಾಗಿತ್ತು. ಅದೇ ದಿನ ನರಸಿಂಹ ಮಾಣಿಯವರು ಮೈಸೂರು ತೆರಳುತ್ತಿದ್ದ ಸಂದರ್ಭದಲ್ಲಿ ರಾತ್ರಿ ಒಂಬತ್ತು ಗಂಟೆಗೆ ಅವರಿಗೆ ಯಾವುದೇ ನೋಟಿಸ್ ನೀಡದೆ ಸುಳ್ಯದಲ್ಲಿ ಅಕ್ರಮವಾಗಿ ಪೊಲೀಸ್ ವಶಕ್ಕೆ ಪಡೆದಿದ್ದರು.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತುರ್ತು ಕಾರ್ಯ ಪ್ರವೃತ್ತರಾದ ಹಿರಿಯ ವಕೀಲರಾದ ರಾಜೇಶ್ ಬೊಲ್ಲು ಕಲ್ಲು ಮತ್ತು ಸುರೇಶ್ ಪೂಜಾರಿಯವರು ಯಾವುದೇ ಜಾಮೀನು ನೀಡದೆ ಜಿಲ್ಲಾ ಸಂಯೋಜಕರನ್ನು ಬಿಡಿಸಿಕೊಂಡು ಬಂದಿದ್ದರು.

ನಂತರ ಈ ಪ್ರಕರಣವನ್ನು ಹಿರಿಯ ವಕೀಲರಾದ ಅರುಣ್ ಶ್ಯಾಮ್ ಮತ್ತು ಸುಯೋಗ್ ಹೇರಳೆಯವರ ಮುಖಾಂತರ ಹೈಕೋರ್ಟ್ ಮೆಟ್ಟಿಲೇರಿ ಇದೀಗ ಈ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

- Advertisement -

Related news

error: Content is protected !!