Sunday, July 26, 2026
spot_imgspot_img
spot_imgspot_img

ಪುತ್ತೂರು : ಶೇಂದಿ ಮೂರ್ತೆಗೆ ತೆಂಗಿನ ಮರ ಹತ್ತಿದ್ದ ವ್ಯಕ್ತಿ ಮೃತ್ಯು..!

- Advertisement -
- Advertisement -

ಪುತ್ತೂರು : ಶೇಂದಿ ಮೂರ್ತೆಗೆ ತೆಂಗಿನ ಮರ ಹತ್ತಿದ್ದ ವ್ಯಕ್ತಿ ತೆಂಗಿನ ಮರದಲ್ಲೇ ಸಾವನ್ನಪ್ಪಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿ ಕೇರಳ ಮೂಲದವರಾಗಿದ್ದು ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ಕೊಲ್ಲಮೊಗ್ರು ಬಳಿಯ ಪನ್ನೆಯ ವ್ಯಕ್ತಿಯೋರ್ವರ ಜಾಗದ ತೆಂಗಿನ ಮರದಿಂದ ಈತ ಶೇಂದಿ( ನೀರಾ) ಮೂರ್ತೆ ನಡೆಸುತ್ತಿದ್ದರು. ಎಂದಿನಂತೆ ಶೇಂದಿ ಇಳಿಸಲು ಮರ ಹತ್ತಿದ್ದ ಅವರು ಅಲ್ಲೇ ಅಸ್ವಸ್ಥಗೊಂಡು ಬೊಬ್ಬೆ ಹಾಕಿದರೆನ್ನಲಾಗಿದೆ. ಇದನ್ನು ಕೇಳಿಸಿಕೊಂಡ ಸ್ಥಳೀಯ ರೋರ್ವರು ಗಮನಿಸಿ ಮರ ಹತ್ತಿದಾಗ ಅವರು ಅವರು ಉಸಿರಾಡುತ್ತಿದ್ದರೆನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳದವರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬಂದಿ ಮರದಿಂದ ಆತನನ್ನು ಇಳಿಸಿದ್ದು ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!