Saturday, July 25, 2026
spot_imgspot_img
spot_imgspot_img

ನವ ಮಂಗಳೂರು ಬಂದರು ಮೇಲ್ದರ್ಜೆಗೇರಿಸಲು 438.29 ಕೋಟಿ ರೂ. ಅನುಮೋದನೆ

- Advertisement -
- Advertisement -

ಮಂಗಳೂರು: ನವ ಮಂಗಳೂರು ಬಂದರಿನ ಮೂಲಸೌಕರ್ಯಗಳು ಮೇಲ್ದರ್ಜೆಗೇರಿಸಲು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು 438.29 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆಯಿಂದ ಬಂದರಿನ ಬರ್ತ್‌ ನಂ.9ರಲ್ಲಿ ಕೈಗೆತ್ತಿಕೊಳ್ಳಲಿರುವ ಪುನರ್‌ ಅಭಿವೃದ್ಧಿ ಕಾಮಗಾರಿಯು ಲಿಕ್ವಿಡ್‌ ಕಾರ್ಗೋ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಇದು ಬೃಹತ್ ಹಡಗುಗಳ ಆಗಮನಕ್ಕೆ ಅನುಕೂಲ ಮಾಡಿಕೊಡುವುದಲ್ಲದೆ ಕರಾವಳಿ ಕರ್ನಾಟಕ ಮತ್ತು ಕೇರಳದ ಒಳನಾಡು ಪ್ರದೇಶಗಳಿಗೆ ಪ್ರಮುಖ ಮೆರಿಟೈಮ್‌ ಹಾಗೂ ಎನರ್ಜಿ ಗೇಟ್‌ವೇ ಆಗಿ ಬಂದರಿನ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿದೆ.

ಈ ಅಭಿವೃದ್ಧಿ ಕಾಮಗಾರಿ ಯೋಜನೆಯು ಕರಾವಳಿ ಭಾಗದ ಪ್ರಮುಖ ಕೈಗಾರಿಕೆಗಳು, ಲಾಜಿಸ್ಟಿಕ್ಸ್ ವ್ಯವಸ್ಥೆ ಮತ್ತು ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!