Thursday, July 23, 2026
spot_imgspot_img
spot_imgspot_img

ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಕೀ ಕದ್ದು ಸ್ಕೂಟರ್‌ನೊಂದಿಗೆ ಪರಾರಿಯಾದ ಕಳ್ಳರು

- Advertisement -
- Advertisement -

ಕಾರ್ಕಳ, ಎ.20: ಮನೆಯೊಳಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿ, ಬಳಿಕ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿಕೊಂಡು ಹೋದ ಘಟನೆ ಕಾರ್ಕಳ ಕರಿಯಕಲ್ಲು ಎಂಬಲ್ಲಿ ನಡೆದಿದೆ.

ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಶೆಟ್ಟಿ ಎಂಬವರು ಎ.16ರಂದು ಮನೆಗೆ ಬೀಗ ಹಾಕಿ ಹೋಗಿದ್ದು, ಎ.19ರಂದು ಬೆಳಗ್ಗೆ ಮನೆಯಲ್ಲಿ ಕಳವು ನಡೆದಿರುವುದು ಕಂಡುಬಂದಿದೆ.

ಈ ಅವಧಿಯಲ್ಲಿ ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನೊಳಗಿದ್ದ ಬಟ್ಟೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದು, ನಂತರ ಮನೆಯ ಒಳಗಡೆ ಇರಿಸಿದ್ದ ಸ್ಕೂಟರ್‌ನ ಕೀಯನ್ನು ತೆಗೆದುಕೊಂಡು ಬಂದು ಮನೆಯ ಹೊರಗಡೆ ನಿಲ್ಲಿಸಿದ ಕೆಎ-20-ಇಎಸ್-8541 ನಂಬರಿನ ಸ್ಕೂಟರ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!