Thursday, April 18, 2024
spot_imgspot_img
spot_imgspot_img

ಉಡುಪಿ: ಶಿರ್ವ ಮಹಿಳಾ ಮಂಡಲದ ಆಶ್ರಯದಲ್ಲಿ ಮೇ 31ರ ವರೆಗೆ ಮಕ್ಕಳಿಗಾಗಿ ಆನ್ ಲೈನ್ ಬೇಸಿಗೆ ಶಿಬಿರ “ಚಿಣ್ಣರು-2021”

- Advertisement -G L Acharya panikkar
- Advertisement -

ಶಿರ್ವ: ಮಹಿಳಾ ಮಂಡಲದ ಆಶ್ರಯದಲ್ಲಿ ನಿನ್ನೆಯಿಂದ ಮೇ 31ರ ವರೆಗೆ ಮಕ್ಕಳಿಗಾಗಿ ಆನ್ ಲೈನ್ ಬೇಸಿಗೆ ಶಿಬಿರ “ಚಿಣ್ಣರು–2021” ನಡೆಯಲಿದೆ.

ಆರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಸುಮಾರು 7ರಿಂದ 14ವರ್ಷ ವಯಸ್ಸಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ಸುಮಾರು 65 ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಂಡಿದ್ದಾರೆ.

ಪ್ರಥಮ ಬಾರಿ ಇಂತಹ ಶಿಬಿರವನ್ನು ಮಹಿಳಾ ಮಂಡಲದ ಆಶ್ರಯದಲ್ಲಿ ಆಯೋಜಿಸಿದ್ದರೂ ವಿದ್ಯಾರ್ಥಿಗಳು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಇನ್ನೂ ನೋಂದಣಿಗಾಗಿ ಕರೆಗಳು ಬರುತ್ತಿವೆ.

ನಮ್ಮ ಮಿತಿ ಐವತ್ತು ಎಂದು ನಿಗದಿಗೊಳಿಸಿದ್ದರೂ , ವಿದ್ಯಾರ್ಥಿಗಳ ಉತ್ಸಾಹವನ್ನು ಗಮನಿಸಿ ಮಿತಿಯನ್ನು 65ಕ್ಕೆ ಹೆಚ್ಚಿಸಲಾಗಿದೆ.

ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನವೂ ವಿವಿಧ ಸ್ಪರ್ಧೆಗಳು ನಡೆಯಲಿವೆ. ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳು ಇಂದು ಕೇವಲ ಟಿವಿ, ಮೊಬೈಲ್, ಕಂಪ್ಯೂಟರ್ ಗಳೊಂದಿಗೆ ಅಂಟಿಕೊಂಡಿದ್ದು , ಅವರಲ್ಲಿ ಚಟುವಟಿಕೆಗಳು ಮಾಯವಾಗಿವೆ. ಈ ನಿಟ್ಟಿನಲ್ಲಿ ನಾವು ಆಯೋಜಿಸಿರುವ ಈ ಶಿಬಿರವು ಅವರನ್ನು ಕ್ರಿಯಾಶೀಲರನ್ನಾಗಿ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆಯವರು ತಿಳಿಸಿದ್ದಾರೆ.

ಈ ಬೇಸಿಗೆ ಶಿಬಿರವನ್ನು ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ ರವರು ಝೂಮ್ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದ್ದಾರೆ .

ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ, ಉಪಾಧ್ಯಕ್ಷೆ ಸುಮತಿ ಸುವರ್ಣ, ಕಾರ್ಯದರ್ಶಿ ಸ್ಪೂರ್ತಿ ಶೆಟ್ಟಿ, ಜೊತೆ ಕಾರ್ಯದರ್ಶಿ ಗೀತಾ ಮೂಲ್ಯ, ಕಾರ್ಯಕಾರಿ ಸಮಿತಿಯ ಮಾಲತಿ ಮುಡಿತ್ತಾಯ, ಸುನೀತಾ ಸದಾನಂದ್, ವನಿತಾ ನಾಯಕ್, ಮುಂತಾದವರು ಝೂಮ್ ಸಭೆಯಲ್ಲಿ ಭಾಗವಹಿಸಿದ್ದರು.

driving
- Advertisement -

Related news

error: Content is protected !!