Sunday, November 1, 2026
spot_imgspot_img
spot_imgspot_img

ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ; ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಬೀಡಿನಮಜಲು ಉಪಾಧ್ಯಕ್ಷರಾಗಿ ರಾಮ ಭಟ್ ನೀರಪಳಿಕೆ ಶತಮಾನೋತ್ಸವ ಆಚರಿಸಿದ ಸಹಕಾರಿ ಸಂಘದಲ್ಲಿ 40 ವರ್ಷಗಳ ಬಳಿಕ ನಡೆದ ಚುನಾವಣೆ

- Advertisement -
- Advertisement -

ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಬೀಡಿನಮಜಲು ಹಾಗೂ ಉಪಾಧ್ಯಕ್ಷರಾಗಿ ರಾಮ ಭಟ್ ನೀರಪಳಿಕೆ ಆಯ್ಕೆಯಾಗಿದ್ದಾರೆ.

ಶತಮಾನೋತ್ಸವ ಆಚರಿಸಿದ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿ 40 ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾದ್ದರು. ಇಂದು ಇಡ್ಕಿದು ಮುಖ್ಯ ಕಚೇರಿಯಲ್ಲಿ ನಡೆದ ಅಧ್ಯಕ್ಷ ಉಪಾದ್ಯಕ್ಷ ಆಯ್ಕೆ ಪ್ರಕ್ರಿಯೆ ಸರ್ವಾನುಮತದಿಂದ ನಡೆಯಿತು.ಬಳಿಕ ಕಬಕ ಶಾಖೆಯ ಸಭಾಂಗಣದಲ್ಲಿ ಹಿಂದಿನ ಆಡಳಿತ ಮಂಡಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಹೊಸ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭಾಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಜಗನ್ನಾಥ ಕಾಸರಗೋಡು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು ಸ್ವಾಗತಿಸಿ, ರಾಮ ಭಟ್ ನೀರಪಳಿಕೆ ಧನ್ಯವಾದಗೈದರು, ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಭಾರತೀಯ ಮಾಜಿ ಉಪಾದ್ಯಕ್ಷ ಕೊಂಕೋಡಿ ಪದ್ಮನಾಭ, ಡಿಸಿಸಿಸಿ ಬ್ಯಾಂಕ್‌ನ ಪ್ರತಿನಿಧಿ ಯೋಗೀಶ್, ಇಡ್ಕಿದು ಗ್ರಾಮ ಪಂಚಾಯತ್‌ನ ಉಪಾದ್ಯಕ್ಷ ಪದ್ಮನಾಭ ಸಪಲ್ಯ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್ ನಾಗರಾಜ್, ಕುಳ ಬಿಜೆಪಿ ಶಕ್ತಿ ಕೇಂದ್ರದ ಅದ್ಯಕ್ಷ ಪ್ರಶಾಂತ್ ಶೆಟ್ಟಿ ಬರೆ, ಕಾರ್ಯಕರ್ತರು ಮತ್ತು ಸದಸ್ಯರು ಉಪಸ್ಥಿತರಿದ್ದರು.ನೂತನ ಅಧ್ಯಕ್ಷರಾಗಿ ಬಿ. ಸುಧಾಕರ ಶೆಟ್ಟಿ ಬೀಡಿನಮಜಲು, ಉಪಾಧ್ಯಕ್ಷರಾಗಿ ರಾಮ ಭಟ್ ಕೆ. ನೀರಪಳಿಕೆ. ನಿರ್ದೇಶಕರಾಗಿ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ಪದ್ಮಾವತಿ, ವಿದ್ಯಾ.ವಿ, ನವೀನ ಕೆ.ಪಿ.‌, ಹೃಷಿಕೇಶ್ ಕೆ. ಎಸ್ , ಆನಂದ. ಕೆ, ಸತೀಶ್ ಕೆ, ಉಮೇಶ್ , ಲೋಹಿತಾಶ್ವ ಅಧಿಕಾರ ವಹಿಸಿಕೊಂಡರು.ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಆಧಿಕಾರಿ ಈಶ್ವರ ನಾಯ್ಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.40 ವರ್ಷಗಳಿಂದ ಇಡ್ಕಿದು ಸೇವಾ ಸಹಕಾರಿ ಸಂಘದಲ್ಲಿ ದುಡಿದ ಮುಂದಿನ ತಿಂಗಳು ನಿವೃತ್ತಿಗೊಳಲಿರುವ ಜಿನ್ನಪ್ಪರವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!