Tuesday, July 21, 2026
spot_imgspot_img
spot_imgspot_img

ಮರಳು ಸುರಿಯುತ್ತಿದ್ದ ವೇಳೆ ಟಿಪ್ಪರ್ ವಿದ್ಯುತ್ ತಂತಿಗೆ ತಗುಲಿ ಚಾಲಕ ಸಾವು

- Advertisement -
- Advertisement -

ಹಾಸನ: ಎಂ ಸ್ಯಾಂಡ್ ಸುರಿಯುವ ಸಂದರ್ಭ ಟಿಪ್ಪರ್ ವಾಹನವು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸಂಭವಿಸಿದ ಅವಘಡದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟ ರ್ಘಟನೆ ಬೇಲೂರು ತಾಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಗ್ರಾಮದ ದಿಲೀಪ್ (33) ಮೃತಪಟ್ಟವರು.ಟಿಪ್ಪರ್ ನಿಂದ ಎಂ ಸ್ಯಾಂಡ್ ಇಳಿಸುತ್ತಿದ್ದಾಗ ಅಲ್ಲೇ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ವಾಹನ ತಗುಲಿದೆ. ತಕ್ಷಣವೇ ವಿದ್ಯುತ್ ಪ್ರವಾಹ ಹರಿದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಸುದ್ದಿ ತಿಳಿದು ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!