- Advertisement -
- Advertisement -



ಕಡಂಬು ರಾಮಚಂದ್ರ ನಾಯ್ಕ ಬಿ ಅವರು 35 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸುಧೀರ್ಘ ಸೇವೆಯನ್ನು ಮಾಡಿ ದ.ಕ. ಜಿ .ಪ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಲಿದ್ದಾರೆ. ಇವರನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷ ಶ್ವೇತಾ ರವಿಕುಮಾರ್, ಕಾರ್ಯದರ್ಶಿ ದಿನಕರ್ ಆಳ್ವ ,ಖಜಾಂಜಿ ಸಂದೇಶ್ ಶೆಟ್ಟಿ ಬಿಕ್ನಾಜೆ, ಜಿಲ್ಲಾ ಲಯನ್ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ,ಜೊತೆ ಕಾರ್ಯದರ್ಶಿ ಸಾಯಿ ಗೀತಾ ಪಡಿಯಾರ್, ಲಯನ್ ಸದಸ್ಯ ಧರ್ಣಪ್ಪ ಗೌಡ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹಸೈನಾರ್, ಸಹ ಶಿಕ್ಷಕ ಶೋಭಲತಾ ಎಂ, ರಶ್ಮಿ ಎಂ.ವಿ ಅತಿಥಿ ಶಿಕ್ಷಕಿ ಸುಮಿತಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Advertisement -








