Saturday, April 27, 2024
spot_imgspot_img
spot_imgspot_img

ವಿಟ್ಲ: ಕೋವಿಡ್ ನಿಯಮ ಉಲ್ಲಂಘಣೆ: ಬಟ್ಟೆ ಅಂಗಡಿಗೆ ದಾಳಿ, ಮಾಲಕನಿಗೆ ದಂಡ!

- Advertisement -G L Acharya panikkar
- Advertisement -

ವಿಟ್ಲ: ಕೋವಿಡ್ ನಿಯಮ ಉಲ್ಲಂಘಿಸಿ ಯಾರಿಗೂ ಗೊತ್ತಾಗದಂತೆ ಬಟ್ಟೆ ಅಂಗಡಿ ಮಾಲಕ ವ್ಯಾಪಾರ ನಡೆಸುತ್ತಿದ್ದ ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ತಂಡ ದಾಳಿ ನಡೆಸಿ, 3,500 ರೂ. ದಂಡ ವಿಧಿಸಿದ್ದಾರೆ.

ವಿಟ್ಲ-ಪುತ್ತೂರು ರಸ್ತೆಯಲ್ಲಿರುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ QB ಫ್ಯಾಶನ್ ಎಂಬ ಬಟ್ಟೆ ಅಂಗಡಿ ಮಾಲಕ ಮತ್ತು ಸಿಬ್ಬಂದಿ ಮುಂಭಾಗದಲ್ಲಿ ಶಟರ್ ಹಾಕಿದ್ದು, ಒಳಗಡೆ ಗ್ರಾಹಕರನ್ನು ಸೇರಿಸಿಕೊಂಡು ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸಲಾಗುತ್ತಿತ್ತು.

ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ರವರ ತಂಡ ದಾಳಿ ನಡೆಸಿ ಅಂಗಡಿ ಮಾಲಕನಿಗೆ 3,500 ರೂ. ದಂಡ ವಿಧಿಸಿದ್ದಾರೆ.

ಅಗತ್ಯ ವಸ್ತುಗಳ ಹೊರತುಪಡಿಸಿ ಇನ್ನುಳಿದ ಕೆಲ ಅಂಗಡಿಗಳು ವ್ಯಾಪಾರ ನಡೆಸುತ್ತಿದೆ. ಕೋವಿಡ್ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!