Friday, July 24, 2026
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ದಿ| ಎಲ್‌.ಎನ್‌ ಕುಡೂರುರವರಿಗೆ ನುಡಿ ನಮನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಹೃದಯಾಘಾತದಿಂದ ನಿಧನರಾದ ಎಲ್‌.ಎನ್‌ ಕುಡೂರು ಇವರಿಗೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಛೇರಿ ಹಾಗೂ ಶಾಖೆಗಳಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದಿ| ಎಲ್‌.ಎನ್‌ ಕುಡೂರುರವರ ಭಾವಚಿತ್ರಕ್ಕೆ ಹೂಹಾರ ಹಾಕಿ ಪುಷ್ಪಾರ್ಚನೆ ಗೈದು ಗೌರವ ಪೂರ್ವಕವಾಗಿ ನುಡಿ ನಮನವನ್ನು ಸಲ್ಲಿಸಲಾಯಿತು.

ದಿ| ಎಲ್‌.ಎನ್‌ ಕುಡೂರುರವರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನಲ್ಲಿ 2006 ನೇ ಇಸವಿಯಿಂದ ನಿರ್ದೇಶಕರಾಗಿ ಹಾಗೂ ದಿನಾಂಕ 1-04-2010 ರಿಂದ 08-03-2020 ರ ತನಕ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದಲ್ಲದೆ, ಎಲ್ಲಾ ಸಿಬ್ಬಂದಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಪ್ರೀತಿ, ವಿಶ್ವಾಸ, ಮಮತೆಯಿಂದ, ಸಿಬ್ಬಂದಿಗಳ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದವರು. ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಶ್ರೇಯೋಭಿವೃಧಿಗೆ ಇವರ ಕೊಡುಗೆ ಅಪಾರ.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಎಲ್ಲಾ ಸಿಬ್ಬಂದಿವರ್ಗದವರು ಹಾಗೂ ಸದಸ್ಯ ಗ್ರಾಹಕ ಬಂಧುಗಳು ಉಪಸ್ಥಿತರಿದ್ದರು.

ಪುತ್ತೂರು: ಮಾಜಿ ಅಧ್ಯಕ್ಷರಾದ ದಿ| ಎಲ್‌.ಎನ್‌ ಕುಡೂರು ಇವರಿಗೆ ಪುತ್ತೂರು ಶಾಖೆಯ ವತಿಯಿಂದ ನುಡಿನಮನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದಿ| ಎಲ್‌.ಎನ್‌ ಕುಡೂರು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮೌನ ಪ್ರಾರ್ಥನೆ ಗೈದು ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ನ ಉಪಾಧ್ಯಕ್ಷ ಶ್ರೀ ಮೋಹನ್ ಕೆ ಎಸ್, ಕನೂನು ಸಲಹೆಗಾರ ಎಂಟಿ ಗೋಪಾಲಕೃಷ್ಣ ಭಟ್, ಗ್ರಾಹಕರು , ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ, ಕಮಿಷನ್ ಏಜೆಂಟ್ಸ್ ಉಪಸ್ಥಿತರಿದ್ದರು.

- Advertisement -

Related news

error: Content is protected !!