

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಚರ್ಚಾಸ್ಪದ ವಕ್ಫ್ ತಿದ್ದುಪಡಿ ಮಸೂದೆ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಶನಿವಾರ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2025 ಕ್ಕೆ ಸಹ ತಮ್ಮ ಒಪ್ಪಿಗೆ ನೀಡಿದ್ದಾರೆ.
ಈ ಮೂಲಕ ಸಂಸತ್ತಿನ ಈ ಕಾಯ್ದೆಗೆ ಏಪ್ರಿಲ್ 5, 2025 ರಂದು ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ. ವಕ್ಫ್ (ತಿದ್ದುಪಡಿ) ಕಾಯ್ದೆ, 2025″ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ. ಮಧ್ಯಾಹ್ನ ಆರಂಭವಾಗಿ ರಾತ್ರಿಯಿಡೀ ಮುಂದುವರಿದು 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾಜ್ಯಸಭೆಯು ವಿವಾದಾತ್ಮಕ ಶಾಸನಕ್ಕೆ ಅನುಮೋದನೆ ನೀಡಿದ ನಂತರ ಕಳೆದ ಶುಕ್ರವಾರ ಮುಂಜಾನೆ ಸಂಸತ್ತು ಮಸೂದೆಯನ್ನು ಅಂಗೀಕರಿಸಿತು.ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಂಘಟನೆಗಳಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದೆ. ಅವರು ಮಸೂದೆಯನ್ನು “ಮುಸ್ಲಿಂ ವಿರೋಧಿ” ಮತ್ತು “ಅಸಂವಿಧಾನಿಕ” ಎಂದು ಕರೆದಿದ್ದಾರೆ. ಸರ್ಕಾರವು ಇದನ್ನು “ಐತಿಹಾಸಿಕ ಸುಧಾರಣೆ” ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳುತ್ತಿದೆ.








