
ಅಡ್ಯನಡ್ಕ: ಕೇಂದ್ರ ಮಟ್ಟದ ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಮಸಾಚರಣೆಯನ್ನು ಸೆ. 21ರಂದು ಅಡ್ಯನಡ್ಕ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ರಾಘವ ಸಾರಡ್ಕ ವಹಿಸಿದ್ದರು. ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀ ವಿಶ್ವೇಶ್ವರ ಭಟ್ ರವರು ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಿದರು.

ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಸೋಮಕ್ಕ ರವರು ಪ್ರಸ್ತವಿಕವಾಗಿ ಮಾತನಾಡಿ ಯೋಜನೆಯ ಸವಲತ್ತಿನ ಕುರಿತು ತಿಳಿಸಿದರು.

ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಗೀತಾಶ್ರೀ ಮಕ್ಕಳ ಹಾಗೂ ಮಹಿಳೆಯರ ದೌರ್ಜನ್ಯದ ಕುರಿತು ಮಕ್ಕಳ ಸಾಗಾಟ ಮಾರಾಟದ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ, ಕೇಶವ ನಾಯ್ಕ, ಶ್ರೀಮತಿ ಸುಮಿತ್ರಾ ಹಾಜರಿದ್ದರು. ಸಿಡಿಪಿಒ ಉಷಾ. ಡಿ, ಎಲ್. ಹೆಚ್. ವಿ ಗಿರಿಜ ಬಿ. ಟಿ, ಕಿರಿಯ ಅರೋಗ್ಯ ಕಾರ್ಯಕರ್ತೆ ಶ್ರೀಮತಿ ರಾಧ ರವರು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಆಶಾಕಾರ್ಯಕರ್ತೆ, ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಪೋಷಕರು, ಅಂಗನವಾಡಿ ಸಹಾಯಕಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಯಮುನ ಪೌಷ್ಠಿಕ ಗೀತೆ ಹಾಡಿ ಕಾರ್ಯಕ್ರಮ ನಿರೂಪಿಸಿದರು.












