Friday, April 19, 2024
spot_imgspot_img
spot_imgspot_img

ಅಪ್ಘಾನಿಸ್ತಾನದಲ್ಲಿರುವ ಭಾರತೀಯರ ಸುರಕ್ಷತೆಗೆ ಕ್ರಮ; ವಿದೇಶಾಂಗ ಇಲಾಖೆ

- Advertisement -G L Acharya panikkar
- Advertisement -

ನವದೆಹಲಿ: ಅಪ್ಘಾನಿಸ್ತಾನವೂ ತಾಲಿಬಾಲಿಗಳ ಕೈವಶವಾದ ಬಳಿಕ ಭಾರತದ ವಿದೇಶಾಂಗ ಇಲಾಖೆ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದು, “ಅಫ್ಗಾನ್ ಪರಿಸ್ಥಿತಿಯನ್ನು ಭಾರತವು ನಿರಂತರವಾಗಿ ಗಮನಿಸುತ್ತಿದ್ದು ಭಾರತೀಯ ಪ್ರಜೆಗಳ ರಕ್ಷಣೆ ಹಾಗೂ ಭದ್ರತೆ ಹಾಗೂ ಅಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾ‍ಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ತಿಳಿಸಿದೆ.

“ಆ ದೇಶದ ಬೆಳವಣಿಗೆಗಳ ಬಗ್ಗೆ ನಿಗಾ ಇರಿಸಿದ್ದೇವೆ. ಅಲ್ಲಿ ಇರುವ ಸಿಖ್ ಮತ್ತು ಹಿಂದೂ ಸಮುದಾಯದ ಮುಖಂಡರ ಜತೆ ಸರಕಾರ ಮಾತುಕತೆ ನಡೆಸಿದೆ. ಅಪ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭ ಯಾರನ್ನು ಸಂಪರ್ಕಿಸಬೇಕು ಎಂಬ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನಲ್ಲಿ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ. ನಾವು ಮಾತನಾಡುತ್ತಿರುವಂತೆ ಅದು ವೇಗವಾಗಿ ಬದಲಾಗುತ್ತಿದೆ. ಪರಸ್ಪರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮುಂತಾದ ಪ್ರಯತ್ನಗಳಲ್ಲಿ ಭಾರತದ ಪಾಲುದಾರರಾಗಿರುವ ಹಲವಾರು ಅಫ್ಘಾನಿಸ್ತಾನಿಗಳಿದ್ದಾರೆ. ಭಾರತವು ಅವರ ಬೆಂಬಲಕ್ಕೆ ನಿಲ್ಲುತ್ತದೆ. ಭಾರತಕ್ಕೆ ತತ್ ಕ್ಷಣ ವಾಪಾಸ್ ಆಗಬೇಕು ಎಂಬ ಸೂಚನೆ ಸೇರಿದಂತೆ ನಾವು ಆ ದೇಶದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.

- Advertisement -

Related news

error: Content is protected !!