Sunday, April 28, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ರಚನೆ ಮತ್ತು ಫ್ರೆಷೆರ್ಸ್ ಡೇ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2022-23 ನೇ ಸಾಲಿನ ವಿದ್ಯಾರ್ಥಿ ಮಂತ್ರಿಮಂಡಲ ಹಾಗೂ ಹೊಸದಾಗಿ ದಾಖಲೆ ಹೊಂದಿದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “ಫ್ರೆಷೆರ್ಸ್ ಡೇ” ದಿನಾಂಕ 18-06-2022 ರಂದು ವಿನೂತನ ರೀತಿಯಲ್ಲಿ ಆಚರಿಸಲಾಯಿತು.

2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೆಜಿ.ಯಿಂದ 4ನೇ ತರಗತಿವರೆಗೆ ದಾಖಲಾದ ವಿದ್ಯಾರ್ಥಿಗಳು ಒಟ್ಟು 141 ಹಾಗೂ 5 ರಿಂದ 10 ನೇ ತರಗತಿವರೆಗೆ ಒಟ್ಟು 21 ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎಲ್ ಎನ್ ಕೂಡೂರು ಹೊಸ ವಿದ್ಯಾರ್ಥಿಗಳು ತಮಗೆ ದೊರಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕ್ರಿಯಾಶೀಲರಾಗಬೇಕು ಎನ್ನುತ್ತಾ ಹೊಸ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.

ಈ ಸಂದರ್ಭದಲ್ಲಿ ಈ ವರ್ಷದ ಶಾಲಾ ಮಂತ್ರಿಮಂಡಲದ ಸದಸ್ಯರಿಗೆ ವಿದ್ಯಾರ್ಥಿ ನಾಯಕ ತೇಜಸ್ವಿ ತೆಂಕಬೈಲು ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಕೆ ಜಿ ಯಿಂದ ಹತ್ತನೇ ತರಗತಿಯ ಹೊಸ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಜಯರಾಮ ರೈ ಹಾಗೂ ಉಪ ಪ್ರಾಂಶುಪಾಲರಾದ ಜ್ಯೋತಿ ಶೆಣೈ ಪ್ರಾಸ್ತವಿಕತೆ ಮಾತುಗಳನಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಮೋಹನ ಎ, ಆಡಳಿತಾಧಿಕಾರಿ ಶ್ರೀ ರಾಧಾಕೃಷ್ಣ ಎ, ಸಂತೋಷ್ ಕುಮಾರ್ ಪೆಲತ್ತಡ್ಕ, ಮತ್ತೊರ್ವ ಉಪಪ್ರಾಂಶುಪಾಲೆ ಹೇಮಲತಾ, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಶಾಲಾ ಉಪನಾಯಕ ಕಾಂಚನ್ ಯಶ್ ರಾಜ್ ದೇವದಾಸ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಪೂರ್ಣ ನಿರ್ವಹಣೆಯನ್ನು ವಿದ್ಯಾರ್ಥಿಗಳಾದ ಸಿಂಚನ ಬಿ ಸಿ, ಅಖಿಲೇಶ್, ನಿಹ್ಲಾ ಹೈದರ್, ಆದ್ಯ, ದೃತಿ, ಧಕ್ಷ್, ಗ್ಯಾನದ, ಅಂಜನಾ, ಸಮೃದ್ದಿ, ಧನ್ವಿ, ಸಾನ್ವಿ, ಸಾನ್ವಿ ಡಿ, ಶ್ರೀಮ, ಪಾವನಿ, ಪ್ರಥಮ್ ಪೈ, ಮನೋಜ್ಞ, ನೇಹಾ ನಿರ್ವಹಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಶಿಕ್ಷಕರಾದ ಗುರುವಪ್ಪ ಹಾಗೂ ಗೀತಾ ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

- Advertisement -

Related news

error: Content is protected !!