Thursday, July 23, 2026
spot_imgspot_img
spot_imgspot_img

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಮೃತರಾದವರ ನೆನಪಿಗಾಗಿ 11 ಸೀಟುಗಳು ಮೀಸಲು

- Advertisement -
- Advertisement -

ಬೆಂಗಳೂರು: ಚಿನ್ನಸ್ವಾಮಿಯಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮೃತ 11 ಜನರ ನೆನಪಿಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಮೀಸಲಿಡಲಾಗುವುದು ಎಂದು ಕೆಎಸ್‌ಸಿಎ ತಿಳಿಸಿದೆ.

ಚಿನ್ನಸ್ವಾಮಿಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಕ್ಕೂ 11 ಸೀಟುಗಳನ್ನು ಮೀಸಲಿಡಲಾಗುವುದು ಹಾಗೂ ಈ 11 ಸೀಟುಗಳನ್ನು ಮಾರಾಟ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿಯೂ ಸಹ 11 ಸೀಟುಗಳನ್ನು ಮೃತರ ಹೆಸರಿನಲ್ಲಿ ಮೀಸಲಿಡಲಾಗುವುದು. ಜೊತೆಗೆ ಮುಖ್ಯ ದ್ವಾರದ ಭಾಗದಲ್ಲಿ ಬೋರ್ಡ್ ಅಳವಡಿಕೆ ಮಾಡಿ, ಅದರಲ್ಲಿ ಮೃತರ ಹೆಸರನ್ನ ನಮದು ಮಾಡಲಿದೆ.ಇನ್ನೂ ಆಟಗಾರರು ಪ್ರ್ಯಾಕ್ಟೀಸ್‌ ಮಾಡುವಾಗ 11 ನಂಬರ್‌ನ ಜೆರ್ಸಿಯನ್ನು ಧರಿಸುತ್ತಾರೆ. 11 ಜನರಿಗೆ ಗೌರವಾರ್ಥವಾಗಿ 11 ಖಾಲಿ ಚೇರ್‌ಗಳನ್ನು ಬಿಡಲಾಗುತ್ತೆ. ಹೀಗಾಗಿ ಆ 11 ಟಿಕೆಟ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ.

19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಕೆಎಸ್‌ಸಿಎ & ಆರ್‌ಸಿಬಿ ಮ್ಯಾನೇಜ್ಮೆಂಟ್ ಮೃತರಿಗೆ 1 ನಿಮಿಷ ಮೌನಚಾರಣೆ ಮಾಡಲಿದೆ.

- Advertisement -

Related news

error: Content is protected !!