Thursday, July 23, 2026
spot_imgspot_img
spot_imgspot_img

ಶಾಸಕ ಅಶೋಕ್‌ ಕುಮಾರ್‌ ರೈಯವರಿಂದ ಇಡ್ಕಿದು ಗ್ರಾಮದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ-ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ಇಡ್ಕಿದು ಗ್ರಾಮದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮ ಅ. 12 ನೇ ಆದಿತ್ಯವಾರ ನಡೆಯಿತು.

ಇಡ್ಕಿದು ಗ್ರಾಮದ ಸೂರ್ಯ -ದೇವಸ್ಯ ರಸ್ತೆ ರೂ 10ಲಕ್ಷ, ಸೂರ್ಯ -ಮುಂಡ್ರಬೈಲು ರಸ್ತೆ 10ಲಕ್ಷ, ಮಿತ್ತೂರು -ಗಾಣದ ಕೊಟ್ಯರಸ್ತೆ 10 ಲಕ್ಷ, ಮಿತ್ತೂರು -ಬೀಡಿನಮಜಲು ರಸ್ತೆ 10ಲಕ್ಷ, ಅಳಕೆಮಜಲು ಮಾಸ್ಟರ್ ಪ್ಲಾನ್ನೆರಿ-ಪುಂಡಿಕಾಯಿ ರಸ್ತೆ 5 ಚ ಲಕ್ಷ, ಸೂರ್ಯ ಅಂಗನವಾಡಿ ಕೇಂದ್ರ ಅಭಿವೃದ್ಧಿ ಗೆ 3 ಲಕ್ಷ ಅನುದಾನ ಮಂಜೂರಾಗಿದ್ದು, ಈ ಅನುದಾನಗಳ ಕಾಮಗಾರಿಗಳಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್‌ ಕುಮಾರ್‌ ರೈಯವರು ಗುದ್ದಲಿ ಪೂಜೆ ನೆರವೇರಿಸಿ ಬಳಿಕ ವಿವಿಧ ರಸ್ತೆಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ದಿವಾಕರ ದಾಸ್‌ ನೇರ್ಲಾಜೆ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬಿಡಿನಮಜಲು, ಕಾಂಗ್ರೇಸ್‌ ಮುಖಂಡ ಎಂ ಎಸ್‌ ಮಹಮ್ಮದ್‌, ರಾಜರಾಮ್‌ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಸಪಲ್ಯ, ಮತ್ತು ಪುರುಷೋತ್ತಮ ಕೋಲ್ಪೆ, ಕುಳ ವಲಯ ಕಾಂಗ್ರೇಸ್ ಅಧ್ಯಕ್ಷರಾದ ಪ್ರವೀಣ್‌ ಶೆಟ್ಟಿ ಅಳಕೆಮಜಲು, ವಿಟ್ಲ ಬ್ಲಾಕ್‌ ಕಾಂಗ್ರೇಸ್‌ ಹಿಂದುಳಿದ ವರ್ಗದ ಅಧ್ಯಕ್ಷ ಮೋಹನ್ ಪೂಜಾರಿ, ಯೋಗೀಶ್‌ ಗೌಡ ನೇರ್ಲಾಜೆ, ಲತೀಫ್‌ ಕೋಲ್ಪೆ, ಸುರೇಶ್ ದಾಸ್‌, ಮದನ್‌ ಗೌಡ, ಮತ್ತು ಬೂತ್‌ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಇಡ್ಕಿದು ವಲಯ ಕಾಂಗ್ರೇಸ್‌ ಸಮಿತಿ ಅಧ್ಯಕ್ಷ ನಾಸೀರ್‌ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!