Friday, July 24, 2026
spot_imgspot_img
spot_imgspot_img

ವಿಟ್ಲ: ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಮಹಾ ರಥೋತ್ಸವದ ಪ್ರಯುಕ್ತ ವಾಹನ ಸಂಚಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಬದಲಾವಣೆ; ಪೊಲೀಸ್ ಪ್ರಕಟನೆ

- Advertisement -
- Advertisement -

ವಿಟ್ಲ: ನಾಳೆ ದಿನ ದಿನಾಂಕ 21/01/26 ರಂದು ವಿಟ್ಲ ಮಹಾ ರಥೋತ್ಸವದ ನಿಮಿತ್ತ ಬರುವ ಭಕ್ತಾದಿಗಳಿಗೆ ಈ ಕೆಳಕಂಡ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

1) ಕೇರಳ, ಸಾರಡ್ಕ ಪೆರುವಾಯಿ ಪುಣಚ ಕನ್ಯಾನ ಕಡೆಯಿಂದ ಬರುವ ಭಕ್ತಾದಿಗಳಿಗೆ ಬಾಕಿ ಮಾರು ಗದ್ದೆಯಲ್ಲಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ದು ನಿಲ್ದಾಣದ ಬಳಿ ವಾಹನ ಪಾರ್ಕಿಂಗಿನ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

2) ಸಾಲೆತ್ತೂರು, ಕುಡ್ತಮುಗೇರು ಕಡೆಯಿಂದ ಬರುವ ಭಕ್ತಾದಿಗಳಿಗೆ ವಿಟ್ಲ ಮಾದರಿ ಶಾಲಾ ವಠಾರ ಹಾಗೂ ಕಾಲೇಜು ಮೈದಾನದಲ್ಲಿ ವಾಹನ ಪಾರ್ಕಿಂಗಿನ ವ್ಯವಸ್ಥೆ ಮಾಡಲಾಗಿರುತ್ತದೆ.

3) ಪುತ್ತೂರು ಕಂಬಳ ಬೆಟ್ಟು ಕುಂಡಡ್ಕ ಕಡೆಯಿಂದ ಬರುವ ಭಕ್ತಾದಿಗಳಿಗೆ ವಾಹನದ ಪಾರ್ಕಿಂಗ್ ವ್ಯವಸ್ಥೆಯನ್ನು ವಿಟ್ಲ ಮೇಗಿನಪೇಟೆ ಬ್ರೈಟ್ ಆಡಿಟೋರಿಯಂ ನಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ.
ನಾಳೆ ದಿನ ವಿಟ್ಲ ಬಿಎಸ್ಎನ್ಎಲ್ ಆಫೀಸ್ ಕಡೆಯಿಂದ, ಬೊಬ್ಬೆಕೇರಿ ರಸ್ತೆಯಿಂದ ಹಾಗೂ ವಿಟ್ಲ ಕ್ವಾಲಿಟಿ ಬೇಕರಿ ಕಡೆಯಿಂದ ಹೋಗುವ ರಸ್ತೆಗಳಲ್ಲಿ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ.

- Advertisement -

Related news

error: Content is protected !!