Wednesday, July 22, 2026
spot_imgspot_img
spot_imgspot_img

ಷೇರು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಲಾಸ್–ಮನನೊಂದ ಯುವಕ ನೇಣಿಗೆ ಶರಣು

- Advertisement -
- Advertisement -

ಕಾರವಾರ: ಷೇರು ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.

ನಗರದ ನಿವಾಸಿ ಹರ್ಷವರ್ಧನ್(22) ನೇಣಿಗೆ ಶರಣಾದ ಯುವಕ. ಈತ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ. ಹೀಗೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದನು. ಇದರಿಂದ ಬೇಸತ್ತು ಮನೆಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಹರ್ಷವರ್ಧನ್ ತಂದೆ ಚಂದ್ರಶೇಖರ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!