Tuesday, July 28, 2026
spot_imgspot_img
spot_imgspot_img

ಬೆಂಗಳೂರು:ಜಿಯೋ ಮಾರ್ಟ್‌ ಗೋಡೌನ್‌ನಲ್ಲಿ ಅಗ್ನಿ ಅವಘಡ

- Advertisement -
- Advertisement -

ಬೃಹತ್‌ ಕಟ್ಟಡ, ಕೊಟ್ಯಂತರ ರೂ. ಮೌಲ್ಯದ ವಸ್ತುಗಳು ಭಸ್ಮ!

ನೆಲಮಂಗಲ: ಜಿಯೋ ಮಾರ್ಟ್‌ ಗೋಡೌನ್‌ಗೆ ಬೆಂಕಿ ಬಿದ್ದು ಕೊಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೆಂಕಿಯ ತೀವ್ರತೆಗೆ ಸಂಪೂರ್ಣ ಒಂದೂವರೆ ಎಕರೆಯಲ್ಲಿದ್ದ ಕಟ್ಟಡ ಹಾಗೂ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಅಗ್ನಿ ಅವಘಡದಿಂದ ನೆಲಮಂಗಲ ಹೆದ್ದಾರಿಯಲ್ಲಿ ಭಾರೀ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಗೋಡೌನ್‌ ಒಳಗೆ ತೆರಳಲು ಅಗ್ನಿಶಾಮಕ ಸಿಬ್ಬಂದಿ ಪರದಾಡಿದ್ದರು. ಬಳಿಕ ಜೆಸಿಬಿ ಮೂಲಕ ಗೋಡೆ ಒಡೆದು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸುಮಾರು 10 ಅಗ್ನಿಶಾಮಕ ವಾಹನ ಬಳಸಿ ರಾತ್ರಿ ಪೂರ್ತಿ ಹೋರಾಡಿ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಪದ್ಮರಾಜ್ ಎಂಬವರಿಗೆ ಸೇರಿರುವ ಜಾಗದಲ್ಲಿ ಈ ಕಟ್ಟಡ ಇತ್ತು. 18 ವರ್ಷಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ, ಜಿಯೋ ಮಾರ್ಟ್‌ಗೆ ಬಾಡಿಗೆಗೆ ನೀಡಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!