Sunday, September 13, 2026
spot_imgspot_img
spot_imgspot_img

ಮಂಗಳೂರು: ಕಾರಿನಲ್ಲಿ ಪ್ರಯಾಣಿಸುವಾಗ ಸೈಡ್ ಕೊಡುವ ವಿಚಾರದಲ್ಲಿ ಹಲ್ಲೆ: ಆರೋಪಿಗಳಿಗೆ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: ಕಾರಿನಲ್ಲಿ ಪ್ರಯಾಣಿಸುವಾಗ ಸೈಡ್ ಕೊಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ತ್ವರಿತಗತಿ ನ್ಯಾಯಾಲಯವು ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು 1.34 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಬಂಟ್ವಾಳ ಕಾವಳಪಡೂರು ನಿವಾಸಿ ದಿನೇಶ್‌ ಶೆಟ್ಟಿ (27), ಅರ್ಕುಳ ನಿವಾಸಿ ಧನ್‌ರಾಜ್ ಪೂಜಾರಿ ಯಾನೆ ವಳಚ್ಚಿಲ್ ಧನು (22), ಎಡಪದವು ನಿವಾಸಿ ನವೀನ್ (21), ಕಾರ್‌ಸ್ಟ್ರೀಟ್ ನಿವಾಸಿ ಪ್ರಜ್ವಲ್ ಪೂಜಾರಿ (20), ತಡಂಬೈಲ್ ನಿವಾಸಿ ವಸಂತ್ ಬಾಳ (53) ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.

ಆರೋಪಿ ವಸಂತ ಬಾಳ ಎಂಬಾತ ಕಿಶನ್ ರಾವ್‌ರನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕಾರನ್ನು ಉಳಿದ ಆರೋಪಿಗಳಿಗೆ ನೀಡಿದ್ದ. ಅದರಂತೆ ಅ.22ರಂದು ಆರೋಪಿಗಳು ಮಾರಕಾಯುಧದೊಂದಿಗೆ ಹೊರಟು ಕಾರಿನಲ್ಲಿ ಕುಳಾಯಿ ಹೊಸಬೆಟ್ಟು ಗ್ರಾಮದ ವಿನಾಯಕ ಮೊಸಾಯಿಕ ರಸ್ತೆಯಲ್ಲಿ ಕಾದು ಕುಳಿತ್ತಿದ್ದರು. ಕಿಶನ್ ರಾವ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ದಿನೇಶ್ ಶೆಟ್ಟಿ ಕಾರನ್ನು ಕಿಶನ್ ಮುಂದಿನಿಂದ ಚಲಾಯಿಸಿಕೊಂಡು ಬಂದು ಅಡ್ಡಗಟ್ಟಿ ಢಿಕ್ಕಿಪಡಿಸಿದ್ದ. ಬಳಿಕ ಕಿಶನ್ ರಾವ್‌ಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

ಈ ಕೃತ್ಯಕ್ಕೆ ಎರಡು 2 ದಿನ ಮುಂಚಿತವಾಗಿ ದಿನೇಶ್, ವಸಂತ್ ಹಾಗೂ ಕಿಶನ್ ರಾವ್ ನಡುವೆ ಕಾರಿನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಆ ದ್ವೇಷದಿಂದ 5ನೇ ಆರೋಪಿ ವಸಂತ್ ಬಾಳ ಉಳಿದ ನಾಲ್ವರು ಆರೋಪಿಗಳ ಮೂಲಕ ಕೃತ್ಯವೆಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್‌. ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವ‌ರ್ ಮತ್ತು ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.

- Advertisement -

Related news

error: Content is protected !!