



ಸುಳ್ಯ: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಾಲಿನ ಡೈರಿ ಹಾಗೂ ದಿನಸಿ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.

ದಿನಾಂಕ 17/08/2025 ರಂದು ನಡೆದ ಕಳವು ಪ್ರಕರಣ (ಅ.ಕ್ರ.ಸಂ: 44/2025) ಕುರಿತು 18.03.2026 ರಂದು ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶ ಶಿವಣ್ಣ ಹೆಚ್.ಆರ್. ಅವರು, ಕೇರಳ ಮೂಲದ ಸತೀಶ್ (45) ಎಂಬ ಆರೋಪಿಗೆ ಶಿಕ್ಷೆ ಪ್ರಕಟಿಸಿದರು.
ನ್ಯಾಯಾಲಯವು ಕಲಂ 331(4) BNS ಅಡಿಯಲ್ಲಿ 6 ತಿಂಗಳ ಸಾಧಾರಣ ಸಜೆ ಹಾಗೂ ₹500 ದಂಡ ವಿಧಿಸಿದೆ. ಜೊತೆಗೆ ಕಲಂ 305 BNS ಅಡಿಯಲ್ಲಿ 7 ತಿಂಗಳ ಸಾಧಾರಣ ಸಜೆ ಹಾಗೂ ₹500 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದಲ್ಲಿ 10 ದಿನಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದು ಆದೇಶಿಸಿದೆ.
ಈ ಪ್ರಕರಣದ ತನಿಖೆಯನ್ನು ಪಿ.ಎಸ್.ಐ ಕಾರ್ತಿಕ್ ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡನೆ ನಡೆಸಿದರು.








