Thursday, July 23, 2026
spot_imgspot_img
spot_imgspot_img

ಚಿನ್ನ ಖರೀದಿಗೆ ಹೋಗಿದ್ದವನಿಂದ ಕೋಟಿ ಕೋಟಿ ಹಣ ಪಡೆದು ವಂಚನೆ !

- Advertisement -
- Advertisement -

ಬೆಂಗಳೂರು: ಚಿನ್ನ ಖರೀದಿಗೆ ಹೋಗಿದ್ದವರಿಂದ ಕೋಟಿ ಕೋಟಿ ಹಣ ಪಡೆದು ಚಿನ್ನವನ್ನೂ ಕೊಡದೇ, ಹಣವೂ ಹಿಂತಿರುಗಿಸದೇ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದರ್ ಚಂದ್ ಮಹಿಳೆಯ ಜೊತೆ ಸೇರಿ ಹಣ ಲಪಟಾಯಿಸಿರೋ ಘಟನೆ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದೆ.

ಸರ್ಜಾಪುರ ಮೂಲದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರು. ಪುನೀತ್ ಸಂಬಂದಿ ಸವಿತಾ ರೆಡ್ಡಿ ಹೆಚ್‌ಎಸ್‌ಆರ್‌ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಚಿನ್ನ ಕಡಿಮೆ ಬೆಲೆ ಹಾಗೂ ವೆಸ್ಟೆಜ್ ಚಾರ್ಜ್ ತುಂಬಾನೇ ಕಡಿಮೆ ಇರುತ್ತೆ ಎಂದು ನಂಬಿಸಿದ್ದಾಳೆ. ಸಂಬಂಧಿ ಸವಿತಾ ರೆಡ್ಡಿಯ ಮಾತು ಕೇಳಿ ಪುನೀತ್ ಎರಡು ಕೋಟಿ ನಗದು ಹಣದೊಂದಿಗೆ ಎಂಪಿ ಚಿನ್ನದ ಮಳಿಗೆಗೆ ಹೋಗಿದ್ದಾರೆ. 90 ಲಕ್ಷ ರೂ.ನ ಎರಡು ಕಾಟನ್ ಬಾಕ್ಸ್ ಹಾಗೂ 20 ಲಕ್ಷ ರೂಪಾಯಿ ಒಂದು ಬಾಗ್ ಇಸ್ಕೊಂಡು ಅರ್ಧ ಗಂಟೆ ಹೊರಗಡೆ ಇರಿ ನಿಮ್ಮ ದುಡ್ಡು ಸರಿ ಇದೆ ಎಂದು ನಂಬಿಸಿ ಒಳಗಡೆ ಹೋದವರೇ ಮರಳಿ ಬರಲಿಲ್ಲ.

ಸಿಬ್ಬಂದಿ ಕೇಳಿದರೆ ಮಾಲೀಕರ ಜೊತೆ ಮಾತನಾಡಿ, ಅಂತ ಪುನೀತ್‌ ಕುಟುಂಬಸ್ಥರನ್ನ ದಬಾಯಿಸಿ ಕಳಿಸಿದ್ದಾರೆ. ಮಾಲೀಕನಿಗೆ ಫೋನ್‌ ಮಾಡಿದ್ದರೆ, ಮಹಿಳೆ ಸವಿತಾ ರೆಡ್ಡಿಗೆ ಮಾತನಾಡಿದ್ದೀನಿ ಅಲ್ಲೇ ಮಾತನಾಡಿಕೊಳ್ಳಿ ಎಂದು ಉಡಾಫೆ ಉತ್ತರ ಕೊಟ್ಟು ಕೈ ತೊಳೆದುಕೊಂಡಿದ್ದಾನೆ. 2 ಕೋಟಿ ಹಾರ್ಡ್ ಕ್ಯಾಶ್ ಕೊಟ್ಟು ಕಂಗಾಲಾಗಿದ್ದ ಪುನೀತ್ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದಾಖಲೆ ಸಮೇತವಾಗಿ ದೂರು ನೀಡಿದ್ದಾರೆ. ‌

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕರ ವಿರುದ್ಧ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸರು ಕೂಡ ಅವರ ಜೊತೆಯಲ್ಲಿ ಶಾಮೀಲ್ ಆಗಿದ್ದಾರೆಂದು ಹಣ ಕಳೆದುಕೊಂಡ ಪುನೀತ್ ಆರೋಪಿಸಿದ್ದಾರೆ.

- Advertisement -

Related news

error: Content is protected !!