Sunday, October 6, 2024
spot_imgspot_img
spot_imgspot_img

ಕಾರ್ಕಳ: ವಿದ್ಯುತ್ ಶಾಕ್ ಗೆ ವ್ಯಕ್ತಿ ಬಲಿ

- Advertisement -
- Advertisement -

ಕಾರ್ಕಳ: ಮುಂಡ್ಲಿಯ ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ಉಂಟಾದ ವಿದ್ಯುತ್ ಸೋರಿಕೆಯಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.


ಸಾಂತ್ರಬೆಟ್ಟು ರತ್ನ ವರ್ಮ ಜೈನ್(48) ಎಂಬವರು ಘಟನೆಯಲ್ಲಿ ಕೊನೆಯುಸಿರೆಳೆದವರು.
ಮುಂಡ್ಲಿಯ ತಂಪು ಪಾನೀಯ ತಯಾರಕ ಸಂಸ್ಥೆ ಯಲ್ಲಿ ಜನರೇಟರ್ ಆಫ್‌ ಮಾಡುವ ಸಂದರ್ಭದಲ್ಲಿ ವಿದ್ಯುತ್ ಅಘಾತಕ್ಕೊಳಗಾಗಿ ಸ್ಥಳದಲ್ಲಿ ಕುಸಿದು ಜೀವ ಕಳೆದುಕೊಂಡಿದ್ದಾರೆ.


ಕಂಬಳ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ ಕೀರ್ತಿ ಇವರದಾಗಿದೆ.

- Advertisement -

Related news

error: Content is protected !!