Wednesday, July 22, 2026
spot_imgspot_img
spot_imgspot_img

ಕುಂಡಡ್ಕ: ದಿ| ವಿಠಲ ಪೂಜಾರಿ ಅತಿಕಾರಬೈಲುರವರಿಗೆ ಬಿಲ್ಲವ ಸಂಘ (ರಿ.)ಕುಂಡಡ್ಕ ವತಿಯಿಂದ ಶ್ರದ್ಧಾಂಜಲಿ ಸಭೆ

- Advertisement -
- Advertisement -

ಕುಂಡಡ್ಕ: ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ದಿವಂಗತ ವಿಠಲ ಪೂಜಾರಿ ಅತಿಕಾರಬೈಲುರವರಿಗೆ ಬಿಲ್ಲವ ಸಂಘ (ರಿ.)ಕುಂಡಡ್ಕ ವತಿಯಿಂದ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಇವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಸಭೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಮತ್ತು ನಾರಾಯಣ ಪೂಜಾರಿ ಎಸ್.ಕೆ. ಮಾತನಾಡಿ ವಿಠಲ ಪೂಜಾರಿಯವರ ವ್ಯಕ್ತಿತ್ವ, ಜನರೊಂದಿಗಿನ ಒಡನಾಟ, ಸಂಘಟನೆಯಲ್ಲಿ ಅವರ ಪಾತ್ರದ ಬಗ್ಗೆ ಮಾತನಾಡಿದರು. ಅಕಾಲದಲ್ಲಿ ಪರಮಾತ್ಮನ ಪಾದ ಸೇರಿದ ಶ್ರೀಯುತರಿಗೆ ಸದ್ಗತಿ ದೊರೆಯಲೆಂದು ಹಾರೈಸಿ ಸಂತಾಪ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಚೇತನ್ ಮರುವಾಳ, ಖಜಾಂಚಿ ರಾಜೇಶ್‌ ,ಬೇರಿಕೆ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಮೋಹನ ಗುರ್ಜಿನಡ್ಕ, ಯತೀಶ ಬೇರಿಕೆ, ಸಂಜೀವ ಪೂಜಾರಿ ,ಕೆ.ಟಿ.ಆನಂದ, ನವೀನ್ ಪಟ್ಲ ಮತ್ತು ಎಲ್ಲಾ ಸದಸ್ಯರು ವಿಠಲ ಪೂಜಾರಿ ಅಭಿಮಾನಿ ಬಳಗ ಹಿತೈಷಿಗಳು ,ಬಂಧು ಮಿತ್ರರು ಭಾಗವಹಿಸಿದ್ದರು.

- Advertisement -

Related news

error: Content is protected !!