Tuesday, June 9, 2026
spot_imgspot_img
spot_imgspot_img

ಮಂಗಳೂರು: ಜೂಜಾಟ ಆಡುತ್ತಿದ್ದ 8 ಮಂದಿ ಸೆರೆ; ನಗದು ಪೊಲೀಸ್ ವಶ!

- Advertisement -
- Advertisement -

ಮಂಗಳೂರು: ಕಾವೂರಿನ ಕುಂಜತ್ತಬೈಲ್ ದೇವಿನಗರದ ಮನೆಯೊಂದರ ಬಳಿ ಜೂಜಾಟ ಆಡುತ್ತಿದ್ದ 8 ಮಂದಿಯನ್ನು ಕಾವೂರು ಎಸ್ಸೈ ಹರೀಶ್ ಎಚ್.ವಿ. ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಇಸ್ಪಿಟ್ ಆಟಕ್ಕೆ ಬಳಸಿದ 13,775 ರೂ. ನಗದು ಸಹಿತ 15,225 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಂಧಿತರನ್ನು ಗಿಲ್ಬರ್ಟ್ ನೊರೊನ್ಹಾ, ರಾಜು, ರಿಜ್ವಾನ್, ಶಿವಾಜಿ, ಅಲೆಗ್ಸಾಂಡರ್, ತಂಗಸ್ವಾಮಿ, ಮಂಜುನಾಥ, ಸ್ಟಿವಾರ್ಟ್ ಎಂದು ಗುರುತಿಸಲಾಗಿದೆ. ಕೊರೋನ ಸೋಂಕು ಪಸರಿಸುವುದನ್ನು ತಡೆಯಲು ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಾಗೂ ಅಕ್ರಮವಾಗಿ ಜೂಜಾಟವಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

- Advertisement -

Related news

error: Content is protected !!