Tuesday, July 21, 2026
spot_imgspot_img
spot_imgspot_img

ರಾಜೇಶ್ ವಿಟ್ಲ ನಿರ್ದೇಶನದ ಆರ್.ಕೆ. ಸಮೂಹ ಸಂಸ್ಥೆಗಳು (ರಿ.), ಇವರ ವತಿಯಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ – “ಚಿಣ್ಣರ ಹಬ್ಬ”

- Advertisement -
- Advertisement -

ವಿಟ್ಲ: ರಾಜೇಶ್ ವಿಟ್ಲ ನಿರ್ದೇಶನದ ಆರ್.ಕೆ. ಸಮೂಹ ಸಂಸ್ಥೆಗಳು (ರಿ.), ವಿಟ್ಲ ಇವರ ವತಿಯಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ “ಚಿಣ್ಣರ ಹಬ್ಬ”ವನ್ನು ಏರ್ಪಡಿಸಲಾಗಿದೆ.

ಈ ಶಿಬಿರವು ಏಪ್ರಿಲ್ 10 ರಿಂದ 18ರವರೆಗೆ ಪಂಚಲಿಂಗೇಶ್ವರ ಸದನ ವಿಟ್ಲದಲ್ಲಿ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9.00ರಿಂದ ಸಂಜೆ 4.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ.

ಶಿಬಿರದ ಉದ್ಘಾಟನಾ ಸಮಾರಂಭವು ಏಪ್ರಿಲ್ 11ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.

ಶಿಬಿರದಲ್ಲಿ ನಾಡಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಚಿತ್ರಕಲೆ, ಕ್ರಾಫ್ಟ್, ಜಾದು, ಗ್ರಾಮೀಣ ಕ್ರೀಡೆಗಳು, ಕ್ಲೇಮಾಡ್ಲಿಂಗ್, ಕುಣಿತ ಭಜನೆ,ಮುಖವರ್ಣಿಕೆ, ಯೋಗ, ರಂಗ ತರಬೇತಿ, ಹರಿಕಥೆ, ವ್ಯಕ್ತಿ ವಿಕಸನ ತರಬೇತಿ ಎಲ್ಲಾ ರೀತಿಯ ನೃತ್ಯ ಪ್ರಕಾರಗಳು , ಶೈಕ್ಷಣಿಕ ಪ್ರವಾಸ ಹಾಗೂ ಇತರ ವಿಷಯಗಳ ತರಬೇತಿ ಬಹಳ ಯಶಸ್ಸು ಕಂಡ ಮಕ್ಕಳ ಮಾರುಕಟ್ಟೆ, ಮಾತೃ ಪೂಜೆ, ದೀಪಾವಳಿ, ಗೋವು ಪೂಜೆ ಹೀಗೆ ಅನೇಕ ಹೊಸ ಪ್ರಯೋಗಗಳೊಂದಿಗೆ ಈ ಶಿಬಿರ ನಡೆಯಲಿದೆ.

ಸಂಪರ್ಕಕ್ಕಾಗಿ 9448339207, 8073406749, 9448260688

- Advertisement -

Related news

error: Content is protected !!