ಸುಳ್ಯ: ಕಾರಿನ ಗ್ಲಾಸ್‌ಗೆ ಹಾನಿ ಮಾಡಿದ ಆರೋಪದಲ್ಲಿ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ದೂರುದಾರರಾದ ಬಾಲಚಂದ್ರ (40), ಸುಳ್ಯ ನಿವಾಸಿ, ಇವರ ದೂರಿನಂತೆ ಫೆ.20ರಂದು ಮಧ್ಯಾಹ್ನ ವೇಳೆಯಲ್ಲಿ ಅವರ ಮನೆಯಲ್ಲಿ ತಂದೆ-ತಾಯಿ ಮಾತ್ರ ಇದ್ದ ಸಂದರ್ಭದಲ್ಲಿ, ದೂರುದಾರರ ಜಾಗದ ಗೇಟ್ ತೆರೆಯುತ್ತಾ ಒರ್ವ ವ್ಯಕ್ತಿ ಬೈಕ್‌ನಲ್ಲಿ ಬಂದು, ಅಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಅನ್ನು ಹೆಲ್ಮೆಟ್‌ನಿಂದ ಹೊಡೆದು ಹಾನಿ ಮಾಡಿದ್ದಾನೆ ಎಂದು ತಿಳಿಸಲಾಗಿದೆ.ಹಾನಿಗೊಳಗಾದ ಕಾರಿನ ಗ್ಲಾಸ್ ಅಂದಾಜು ರೂ. 5,000/- ಮೌಲ್ಯದಾಗಿದೆ. ಈ ಕುರಿತು ದೂರುದಾರರ ತಂದೆ-ತಾಯಿ ಆರೋಪಿತನನ್ನು ವಿಚಾರಿಸಿದಾಗ, ಆತ ಯಾವುದೇ ಸ್ಪಷ್ಟ ಮಾಹಿತಿ ನೀಡದೇ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.ನಂತರ ವಿಚಾರಣೆ ನಡೆಸಿದ ವೇಳೆ, ಆರೋಪಿತನು ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಪ್ರೀತ್ ಎಂಬುದಾಗಿ ತಿಳಿದುಬಂದಿದೆ.
ಈ ಸಂಬಂಧ ದೂರುದಾರರು ಫೆ.21ರಂದು ನೀಡಿದ ದೂರಿನ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 25/2026ರಂತೆ ಕಲಂ 324(1), 329(3), 352 BNS 2023 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








