



ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಚಂದಳಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕೇಸರಿ ಸಂಘದ ಅಧ್ಯಕ್ಷ ಶ್ರೀ ಯೋಗೀಶ ಕೇಪುಳಗುಡ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಬಾಂಡಿ, SLV ಗ್ರೂಪ್ ಮೈಸೂರು ಇದರ ಮಾಲಕ ದಿವಾಕರ್ ದಾಸ್ ನೆರ್ಲಾಜೆ, ವಿಟ್ಲದ ಉದ್ಯಮಿ ಸುಬ್ರಾಯ ಪೈ, ದಿನಕರ ಭಟ್ ಮಾವೆ, ಸದಾಶಿವ ಆಚಾರ್ಯ ಕೈಂತಿಲ, ದೇಜಪ್ಪ ಪೂಜಾರಿ ನಿಡ್ಯ, ಡಿ. ಸಂಜೀವ ಪೂಜಾರಿ ವಿಟ್ಲ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ನರ್ಸಪ್ಪ ಪೂಜಾರಿ ಪರನೀರು ಹಾಗೆಯೇ ನಿರ್ದೇಶಕ ಶ್ರೀಮತಿ ಕವಿತಾ ಬೆಳಿಯಪ್ಪ ಗೌಡ ಮುದೂರು, ಚಂದಳಿಕೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಂಜೆತ್ತಿಮಾರ್, ಕುಂಡಡ್ಕ ಗ್ರಾಮ ಪಂಚಾಯತ್ ಸದಸ್ಯ ಶ್ರೀಮತಿ ಪ್ರೇಮಲತಾ ಪಟ್ಲ, ಯುವಕೇಸರಿಯ ಪ್ರಧಾನ ಕಾರ್ಯದರ್ಶಿ ಶ್ರೀ ವನಿತ್ ಅಬೀರಿ ಭಾಗವಹಿಸಿದರು..
ಅಲ್ಲದೇ ಹಿರಿಯ ದೈವ ನರ್ತಕರಾದ ಶ್ರೀ ನಾರಾಯಣ ನಲಿಕೆ ಕಂಬಳಬೆಟ್ಟು, ನಿವೃತ್ತ ಯೋಧ ಶ್ರೀ ಸೇಸಪ್ಪ ಗೌಡ ಹಡೀಲು, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪಿ.ಹೆಚ್.ಡಿ ಪದವಿಯ ಗೌರವಕ್ಕೆ ಪಾತ್ರರಾದ ಶ್ರೀಮತಿ ಸುಧಾ ಯು. ಶೆಟ್ಟಿ ಉಜಿರೆಮಾರು, ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿ ಪದಕ ಪಡೆದಿರುವ ಶ್ರೀ ಪ್ರವೀಣ್ ರೈ ಪಾಲ್ತಾಡಿ, ಕಲಾ ವಿಭಾಗದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀ ದಿನೇಶ್ ಶೆಟ್ಟಿಗಾರ್ ಕೋಡಪದವು, ಅಂತಾರಾಷ್ಟ್ರೀಯ ಕರಾಟೆ ಪಟು ಶ್ರೀ ಸುರೇಶ್ ಮಡಿವಾಳ ಮಾಮೇಶ್ವರ ಮತ್ತು ಯುವಕೇಸರಿ ಸದಸ್ಯರಲ್ಲಿ ಅಯೋಧ್ಯೆ ಕರಸೇವಕರಾಗಿ ಸೇವೆ ಸಲ್ಲಿಸಿದ ಶ್ರೀ ಚಂದ್ರಹಾಸ ಮೂಲ್ಯ ಅಬೀರಿ ಇವರುಗಳನ್ನು ಸನ್ಮಾನಿಸಲಾಯಿತು.
ವಿಟ್ಲ ಸಮೀಪದ ಕುದ್ದುಪದವು ನಿವಾಸಿ ಶ್ರೀ ರಾಜೇಶ್ ಶೆಟ್ಟಿ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 10,000 ರೂ ಮೌಲ್ಯದ ಚೆಕ್ಕು ಮತ್ತು ದೈನಂದಿನ ಖರ್ಚಿಗಾಗಿ 50 ಕೆ. ಜಿ ಅಕ್ಕಿಯನ್ನು ಮತ್ತು ವಿಟ್ಲ ಸಮೀಪದ 4 ಬಡ ಕುಟುಂಬಗಳಿಗೆ ತಲಾ 50 ಕೆ. ಜಿ ಅಕ್ಕಿಯಂತೆ ಮತ್ತು ಚಂದಳಿಕೆ ಶಾಲೆಯ ಶಾಲಾಭಿರುದ್ಧಿ ಸಮಿತಿಗೆ 5000 ರೂ ಧನಸಹಾಯವನ್ನು ಯುವಕೇಸರಿ ಸಂಘದ ವತಿಯಿಂದ ವಿತರಣೆ ಮಾಡಲಾಯಿತು..ಕಳೆದ 9 ವರ್ಷಗಳ ಹಿಂದೆ ಸಂಘಟನೆಯು ಆರಂಭಗೊಂಡು ಕಳೆದ 5 ವರ್ಷಗಳಿಂದ ದತ್ತಿನಿಧಿ ಯೋಜನೆಯಡಿಯಲ್ಲಿ ಬಡವರ್ಗದ ಅನಾರೋಗ್ಯ ಪೀಡಿತರಿಗೆ ಒಟ್ಟು 6,34,530 ಧನ ಸಹಾಯ ಮತ್ತು ಸಾವಿರಾರು ಕೆ. ಜಿ ಅಕ್ಕಿಯನ್ನು ವಿತರಣೆ ಮಾಡಲಾಯಿತೆಂದು ಸಂಘದ ಸಂಚಾಲಕ ಶ್ರೀ ಸುಶಾಂತ್ ಸಾಲಿಯಾನ್ ಚಂದಳಿಕೆ ವರದಿ ವಾಚಿಸಿದರು..
ತದನಂತರ ಬಪ್ಪನಾಡು ಮೇಳದ ಶ್ರೀ ದೇವರಿಗೆ ಚೌಕಿ ಪೂಜೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ರಾತ್ರಿ ಗಂಟೆ 9.00 ಕ್ಕೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಶ್ರೀ ಉಮೇಶ್ ಆಚಾರ್ಯ ಬಾರ್ಯ ವಿರಚಿತ ” ಪರಕೆದ ಪಲ್ಲಂಕಿ ” ತುಳು ಯಕ್ಷಗಾನ ನಡೆಯಿತು.
ಯುವಕೇಸರಿಯ ಗೌರವ ಸಲಹೆಗಾರ ಶ್ರೀ ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಸ್ವಾಗತಿಸಿ, ಸಂಚಾಲಕ ಶ್ರೀ ದಿವಾಕರ ಶೆಟ್ಟಿ ಅಬೀರಿ ವಂದಿಸಿ, ಶ್ರೀ ಹರೀಶ ಪೂಜಾರಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.








