ವಿಟ್ಲ; ಭಾರತದ ಪ್ರತಿಷ್ಠಿತ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ನೂತನ ಕಚೇರಿ ಆಗಸ್ಟ್ 8 ನೇ ಗುರುವಾರ ಬೆಳಗ್ಗೆ 10.30ಕ್ಕೆ ವಿಟ್ಲ ಮುಖ್ಯ ಪೇಟೆಯ ಹೀರಾ ಟವರ್‍ಸ್ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ.
ನೂತನ ಕಚೇರಿಯನ್ನು ಡಾ. ಗೀತಾ ಪ್ರಕಾಶ್ ವೈದ್ಯಾಧಿಕಾರಿ ಸುರಕ್ಷಾ ಹೆಲ್ತ್ ಸೆಂಟರ್ ವಿಟ್ಲ, ಹಾಗೂ ದಿವಾಕರ್ ದಾಸ್ ನೇರ್ಲಾಜೆ , ಮ್ಯಾನೇಜಿಂಗ್ ಡೈರೆಕ್ಟರ್ ಎಸ್‌ಎಲ್‌ವಿ ಗ್ರೂಪ್ ಆಫ್ ಕಂಪೆನಿ ಮೈಸೂರು, ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಮಲೇಶ ಕೆಎನ್ ಡಿ.ಸಿ.ಡಿ, ಕಮಲಾಕ್ಷ ಸುವರ್ಣ ಯು.ಸಿ.ಡಿ, ದೀಪ್ತಿ ಸಿ.ಡಿ, ಶಿಲ್ಪಾ ಶೆಟ್ಟಿ ಸಿ.ಡಿ, ಅಮಿತಾ ರೈ, ಜಿ.ಡಿ, ಜಯಶ್ರೀ ಎಸ್.ಡಿ, ಲಲಿತಾ ಎಸ್.ಡಿ, ರತ್ನಶೇಖರ್ ಎಸ್.ಡಿ, ಮೋಹಿನಿ ಬಿ.ಡಿ, ಯೋಗಿತಾ ಬಿ.ಡಿ, ನಯನಾ ಬಿ.ಡಿ, ಡಾ. ಶ್ರೀರಾಮ್ ಬಿ.ಡಿ, ಇವರುಗಳು ಭಾಗವಹಿಸಲಿದ್ದಾರೆ.
ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸ್ಟಾರ್ ಡೈರೆಕ್ಟರ್ ಶ್ರೀಮತಿ ದಿವ್ಯಾ ಉದಯ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2004 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈ.ಲಿ ಕಂಪೆನಿಯು ವಿಶ್ವ ದರ್ಜೆಯ ಕ್ಷೇಮ ಉತ್ಪನ್ನಗಳಲ್ಲಿ ವ್ಯವಹರಿಸುತ್ತಿರುವ ಪ್ರಮುಖ ನೇರ ಮಾರಾಟದ ಕಂಪನಿಯಾಗಿ ಪ್ರಸಿದ್ಧಿ ಪಡೆದಿದೆ. ವೆಸ್ಟಿಜ್ ಒಂದು ISO 9001-2015 ಪ್ರಮಾಣೀಕೃತ ನೇರ ಮಾರಾಟ ಕಂಪನಿಯಾಗಿದ್ದು, ತನ್ನ ಎಲ್ಲಾ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವಲ್ಲಿ ನಂಬಿಕೆ ಹೊಂದಿದೆ.
ಡೈರೆಕ್ಟ್ ಸೆಲ್ಲಿಂಗ್ ಮುಖಾಂತರ ವಿಶ್ವದ ಅಗ್ರ ನೇರ ಮಾರಾಟ ಕಂಪನಿಗಳ 2020 ಗ್ಲೋಬಲ್ 100 ಪಟ್ಟಿಯಲ್ಲಿ ವೆಸ್ಟಿಜ್ 30 ನೇ ಸ್ಥಾನದಲ್ಲಿದ್ದು, ‘MOST TRUSTED DIRECT SELLING” ಅವಾರ್ಡ್ ಮೂಲಕ ಮನ್ನಣೆ ಪಡೆದ ಏಕೈಕ ಭಾರತೀಯ ಕಂಪನಿಯಾಗಿದೆ. ವೆಸ್ಟಿಜ್ ಕೇಂದ್ರ ಕಚೇರಿ ದೆಹಲಿಯಲ್ಲಿ ಕಾರ್ಯಚರಿಸುತ್ತಿದ್ದು, ಕ್ಷೇಮದ ಮೂಲಕ ಸಂಪತ್ತನ್ನು ಹರಡುವ ಧ್ಯೇಯ ವಾಕ್ಯದೊಂದಿಗೆ ಪ್ರಪಂಚದ 8 ರಾಷ್ಟ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹರಡಿದೆ.
ಕೇವಲ ಹತ್ತು ಉತ್ಪನ್ನಗಳ ಮಾರಾಟದೊಂದಿಗೆ ಗೌತಮ್ ಬಾಲಿ ಎಂಬವರ ಮಾಲಿಕತ್ವದಲ್ಲಿ ಪ್ರಾರಂಭಗೊಂಡ ಈ ಕಂಪೆನಿ ಇದೀಗ ಸುಮಾರು 450 ಕ್ಕಿಂತಲೂ ಅಧಿಕ ಉತ್ಪನ್ನಗಳೊಂದಿಗೆ ಸುಮಾರು 16 ವಿಭಾಗಳಲ್ಲಿ ದೇಶ-ಹೊರದೇಶಗಳಲ್ಲಿ ಬ್ಯುಸ್‌ನೆಸ್ ಕ್ಷೇತ್ರದಲ್ಲಿ ತನ್ನದೇ ಸಾಧನೆಯ ಮೂಲಕ ಜನಪ್ರಿಯವಾಗಿದೆ.