Monday, September 14, 2026
spot_imgspot_img
spot_imgspot_img

ಲಡಾಖ್‌: ಭಾರೀ ಹಿಮಪಾತ: ಐದು ಮೃತದೇಹಗಳು ಪತ್ತೆ!

- Advertisement -
- Advertisement -

ಲಡಾಖ್: ಶ್ರೀನಗರ- ಲೆಹ್ ಹೆದ್ದಾರಿಯ ಲಡಾಖ್ ಸಮೀಪದ ರೋಜಿ ಲಾ ಎಂಬಲ್ಲಿ ಸಂಭವಿಸಿದ ಭೀಕರ ಹಿಮಪ್ರವಾಹದಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ವಾಹನಗಳು ಹಿಮದಲ್ಲಿ ಹೂತುಹೋಗಿದ್ದು, ಈ ಆಯಕಟ್ಟಿನ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಉಂಟಾಗಿದೆ. ಪೊಲೀಸರು, ಸೇನಾ ಸಿಬ್ಬಂದಿ, ಗಡಿ ರಸ್ತೆ ಸಂಸ್ಥೆ ಎಸ್‌ಡಿಆರ್‌ಎಫ್‌ ಮತ್ತು ಸೋನ್‌ಮಾರ್ಗ್ ಜಿಲ್ಲಾಡಳಿತ ಸಿಬ್ಬಂದಿ ಸೇರಿ ಸಮರೋಪಾದಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕನಿಷ್ಠ 15 ವಾಹನಗಳು ಹಿಮದಲ್ಲಿ ಹೂತುಕೊಂಡಿವೆ ಎಂದು ಹೇಳಲಾಗಿದೆ. ಹಿಮಪಾತದಲ್ಲಿ ಸಿಲುಕಿರುವವರ ರಕ್ಷಣೆಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಹಿಮಪಾತದಿಂದಾಗಿ ಶುಕ್ರವಾರ ಸಂಜೆ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಪೊಲೀಸರು ತಿಳಿಸಿದ್ದು, ಈ ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ದ್ರಾಸ್ ಉಪವಿಭಾಗಾಧಿಕಾರಿ ವಿಷಾಲ್ ಅತ್ರಿಯವರು ದೃಢಪಡಿಸಿದ್ದಾರೆ. ಮೃತಪಟ್ಟವರಲ್ಲಿ ಮೂವರು ಪುರುಷರು, ಮಹಿಳೆ ಹಾಗೂ ಮಗು ಸೇರಿದ್ದಾರೆ. ಆದಾಗ್ಯೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್ ಪೋಸ್ಟ್ ನಲ್ಲಿ ಏಳು ಮಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!